ಅಂಜನೀಪುತ್ರ ಸಿನಿಮಾ : ಫಸ್ಟ್ ಡೇ ಫಸ್ಟ್ ಶೋ ಜೋರೋ ಜೋರು | Filmibeat Kannada

2017-12-21 3,519

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತೆ ಬಂದಿದ್ದಾರೆ. 'ರಾಜಕುಮಾರ' ನಂತರ ಅಪ್ಪು 'ಅಂಜನಿಪುತ್ರ'ನಾಗಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಇಷ್ಟು ದಿನ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದ್ದ 'ಅಂಜನಿಪುತ್ರ' ಸಿನಿಮಾ ಇಂದು ರಾಜ್ಯಾದಂತ್ಯ ಬಿಡುಗಡೆಯಾಗಿದೆ. 'ಅಂಜನಿಪುತ್ರ' ಸಿನಿಮಾದ ದರ್ಬಾರ್ ಬಹಳ ಜೋರಾಗಿದೆ. ಅನೇಕ ಕಡೆ ಚಿತ್ರದ ಪ್ರದರ್ಶನ ಮಧ್ಯರಾತ್ರಿಯೇ ಶುರುವಾಗಿದೆ. ಬೆಂಗಳೂರಿನ ತ್ರಿವೇಣಿ, ಬಾಲಾಜಿ, ಲಕ್ಷ್ಮಿ, ಶ್ರೀ ನಿವಾಸ ಸೇರಿದಂತೆ ಸಾಕಷ್ಟು ಚಿತ್ರಮಂದಿರಗಳಲ್ಲಿ ಬೆಳ್ಳಗೆಯೇ ಸಿನಿಮಾದ ಮೊದಲ ಪ್ರದರ್ಶನ ಪ್ರಾರಂಭವಾಗಿದೆ. ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಪುನೀತ್ ರಾಜ್ ಕುಮಾರ್ ಅವರ 'ಅಂಜನಿಪುತ್ರ' ಜಾತ್ರೆ ಇಂದಿನಿಂದ ಆರಂಭವಾಗಿದೆ. 'ಅಂಜನಿಪುತ್ರ' ಸಿನಿಮಾದ ಪ್ರದರ್ಶನ ಬೆಳ್ಳಗೆ ಇದ್ದರು ಕೂಡ ಎಷ್ಟೊ ಚಿತ್ರಮಂದಿರದಲ್ಲಿ ಮಧ್ಯರಾತ್ರಿ 12ಗಂಟೆಗೆ ಜನ ಬಂದು ಚಿತ್ರಕ್ಕಾಗಿ ಕಾಯುತ್ತಿದ್ದಾರೆ.'ಅಂಜನಿಪುತ್ರ' ಸಿನಿಮಾದ ನೋಡಿದ ಪುನೀತ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಾಕಿ ತಮ್ಮ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದಾರೆ.ಇನ್ನು ಇದೀಗ ಅಂಜನೀಪುತ್ರನನ್ನ ನೋಡೋಕೆ ಸೇರಿರೋ ಜನಸಾಗರ ನೋಡಿ.
Actor Puneeth Rajkumar's starrer Kannada movie 'Anjaniputra' released Today(December 21st). And first show started from midnight. The movie is directed by A.Harsha. Watch video to see the crowd gathered for Anjaniputra movie.

Videos similaires